ನಿಮ್ಮ ವಿದ್ಯೆ ನಮ್ಮ ಭರವಸೆ! ಮನೆಯಿಂದಲೇ ಓದೋಣ.. ಕರೋನಾ ಮಹಮ್ಮಾರಿಯನ್ನ ದೇಶದಿಂದ ಓಡಿಸೋಡ: ನಾರಾಯಣ‌ ವಿದ್ಯಾಸಂಸ್ಥೆಗಳ‌ ಸಮೂಹ

0
349

ನಾರಾಯಣ ಶಿಕ್ಷಣಸಂಸ್ಥೆಗಳ ಸಮೂಹವು ವಿಶ್ವದಾದ್ಯಂತ ಹರಡಿರುವ ಕರೋನಾ ವೈರಸ್ ವಿರುದ್ಧ ಭಾರತದಲ್ಲಿ ಮಾರ್ಚ್ 23ರಿಂದ ಏಪ್ರಿಲ್ 14ರ ವರೆಗೆ ಜಾರಿಯಾಗಿರುವ ಲಾಕ್ ಡೌನ್ ನಿಮಿತ್ತ ಉಂಟಾದ ಸವಾಲುಗಳನ್ನು ಎದುರಿಸಲು ಸೂಕ್ತ ಕ್ರಮ ಕೈಗೊಂಡಿದೆ.

ವಿದ್ಯಾರ್ಥಿಗಳು ನಿರಂತರವಾಗಿ ಸಾಗಲು ಯಾವುದೇ ಅಡ್ಡಿಯಾಗದಂತೆ ಮನೆಯಲ್ಲಿಯೇ ಸುರಕ್ಷಿತವಾಗಿ ಕುಳಿತು ಕಲಿಕೆ ಮುಂದುವರೆಸಲು ನಾರಾಯಣ ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಕಲಿಕಾ ತರಗತಿಗಳನ್ನು ಮಾರ್ಚ್23ರಿಂದ ಆರಂಭಿಸಿದ್ದು ಲಾಕ್ ಡೌನ್ ಮುಗಿವವರೆಗೆ ಈ ತರಗತಿಗಳನ್ನು ನಡೆಸಲಾಗುತ್ತದೆ.
ಈ ರೀತಿಯ ಆನ್ ಲೈನ್ ತರಗತಿಗಳನ್ನು ಆನ್ ಲೈನ್ ಅಪ್ ಗಳ ಮುಖಾಂತರ 10,000ಕ್ಕೂ ಅಧಿಕ ತರಗತಿಗಳನ್ನು 600 ವಿವಿಧ ಬ್ರಾಂಚ್ ಗಳಲ್ಲಿ 75,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತಲುಪುವಂತೆ ಯೋಜಿಸಲಾಗಿದೆ. ಎನ್ ಲರ್ನ್, ನಾರಾಯಣ ಆನ್ ಲೈನ್ ಸೀರೀಸ್ ಮೂಲಕ ಆಡಿಯೋ, ವೀಡಿಯೋ, ಅಸೈನ್ಮೆಂಟ್ , ಪರೀಕ್ಷೆಗಳನ್ನು ನೇರವಾಗಿ ವಿದ್ಯಾರ್ಥಿಗಳಿಗೆ ತಲುಪುವಂತೆ ಅವರ ಮೊಬೈಲ್ ಗಳಿಗೆ ಸಂಪರ್ಕ ಹೊಂದಿದೆ. ಅಲ್ಲದೆ ಬೋಧಕವರ್ಗವು ನಿರಂತರವಾಗಿ ಆನ್ ಲೈನ್ ಮೂಲಕ ಸಂಪರ್ಕ ಇದ್ದು ವಿದ್ಯಾರ್ಥಿಗಳಿಗೆ ಕಲಿಕಾಸಹಾಯ ಕಾರ್ಯನಿರತರಾಗಿದ್ದಾರೆ. ವಿದ್ಯಾರ್ಥಿಗಳು, ಬೋಧಕ ವರ್ಗ, ಬೋಧಕೇತರ ಸಿಬ್ಬಂದಿಗಳ ಸುರಕ್ಷತೆಯೇ ನಾರಾಯಣ ಶಿಕ್ಷಣ ಸಂಸ್ಥೆಗಳ ಪ್ರಮುಖ ಉದ್ದೇಶವಾಗಿದೆ.

LEAVE A REPLY

Please enter your comment!
Please enter your name here